ಪಲ್ಲವಿ
ಯಾಕೆ ಹೀಗೆ ಸುಳಿದೇ ನೀನೂ
ಯಾವ ಬಣ್ಣ ಬಳಿದೇ ನೀನೂ
ನಿನ್ನ ಸೇರೋ ಕನಸು ಕಂಡೆನು
ಸೋತೆನು ಹಾ ಸೋತೆನು
ಸೂರ್ಯ ಚಂದ್ರ ಇರುವವರೆಗೂ
ಹಗಲೂ ರಾತ್ರಿ ನೀನೇ ಬೆರಗೂ
ಕಂಡ ಕ್ಷಣದಲ್ಲೇ ಕರಗಿ
ನಾ ಸೋತೆನು ಹಾ ಸೋತೆನು
ಪ್ರೀತಿಯೇ ಏನೂ ನಿನ್ನ ಮಾಯೇ
ಮನಸಿದು ನಿಂತಲ್ಲೇ ಹಾರಾಡಿದೆ
ಆಸೆಯೂ ದಿನಾ ರಂಗೇರಿದೆ
ಸವಿಗನಸೇ ಈಡಾಡಿದೆ
ಈ ಪ್ರೇಮಾ ನಿನ್ನ ಕೊಡುಗೆ ನನಗೆ
ಈ ಪ್ರೇಮಾ ನೀನಿರಲೂ ಬಳಿಗೆ
ಈ ಪ್ರೇಮಾ ಕಣ್ಣ ಸಲುಗೆ ಸಲುಗೆ ಈ ಪ್ರೇಮಾ
ಈ ಪ್ರೇಮಾ ನೀನೇ ವರವೂ ನನಗೆ
ಈ ಪ್ರೇಮಾ ನೀನಿರಲೂ ಜೊತೆಗೆ
ಈ ಪ್ರೇಮಾ ಭಾವ ಬೆಸೆದ ಬೆಸುಗೆ ಈ ಪ್ರೇಮಾ
ಚರಣ
ಏಕೋ ಏನೋ ಮನಸಿದು ಈಗ ಉಯ್ಯಾಲೆಯಂತಾಗಿದೆ
ಬೀಸೋ ಗಾಳಿ ಕಿವಿಯನು ಸೋಕಿ ಇಂಪಾದ ಹಾಡಾಗಿದೆ
ಹೊಸತು ಒಂದು ಭಾವಲೋಕ ನನ್ನಲ್ಲೀ ತೆರೆದಂತಿದೆ
ತರಲೇ ತಾಜಾ ತಾಜಾ ಆಸೆಗಳು ಬಿಟ್ಟುಬಿಡದೆ ಮುತ್ತಿದೆ
ಸದ್ದಿಲ್ಲದೇ ಗೊತ್ತಿಲ್ಲದೇ ಈ ಜ್ವರವೂ ಶುರುವಾಗಿದೆ
ಪ್ರೀತಿಯೇ ಏನೂ ನಿನ್ನ ಲೀಲೇ
ನನಗಿದೋ ಈಗೆಲ್ಲ ಖುಷಿಯಾಗಿದೆ
ಆಸೆಯೂ ದಿನಾ ರಂಗೇರಿದೆ
ಸವಿಗನಸೇ ಈಡಾಡಿದೆ
ಈ ಪ್ರೇಮಾ ನಿನ್ನ ಕೊಡುಗೆ ನನಗೆ
ಈ ಪ್ರೇಮಾ ನೀನಿರಲೂ ಬಳಿಗೆ
ಈ ಪ್ರೇಮಾ ಕಣ್ಣ ಸಲುಗೆ ಸಲುಗೆ ಈ ಪ್ರೇಮಾ
ಈ ಪ್ರೇಮಾ ನೀನೇ ವರವೂ ನನಗೆ
ಈ ಪ್ರೇಮಾ ನೀನಿರಲೂ ಜೊತೆಗೆ
ಈ ಪ್ರೇಮಾ ಭಾವ ಬೆಸೆದ ಬೆಸುಗೆ ಈ ಪ್ರೇಮಾ